ನಾ-ದೆನೆ ಅಮೇರಿಕ ಖಂಡಗಳ ಸ್ಥಳೀಯ ಜನರ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. == ವಿಂಗಡಣೆ == ನಾ-ದೆನೆ ಕುಟುಂಬದೊಳಗೆ ಈ ಕೆಳಗಿನ ಭಾಷೆಗಳು ಸೇರುತ್ತವೆ: ತ್ಲಿಂಗಿಟ್ ಭಾಷೆ: ೭೦೦ ಜನ ಅಥಬಾಸ್ಕನ್-ಇಯಾಕ್ ಇಯಾಕ್ ಭಾಷೆ: ೨೦೦೮ರಲ್ಲಿ ಅಳಿದುಹೋಯಿತು ಅಥಬಾಸ್ಕನ್ ಭಾಷೆಗಳು ಆರಿಜೋನ ಮತ್ತು ನ್ಯೂ ಮೆಕ್ಸಿಕೊಗಳಲ್ಲಿ ಉಪಯೋಗದಲ್ಲಿರುವ ನವಾಹೊ ಭಾಷೆ ಈ ಕುಟುಂಬದ ಭಾಷೆಗಳಲ್ಲಿ ಹೆಚ್ಚು ಉಪಯೋಗದಲ್ಲಿರುವ ಭಾಷೆ. ದಕ್ಷಿಣ ಅಲಾಸ್ಕಾದಲ್ಲಿ ಉಪಯೋಗದಲ್ಲಿದ್ದ ಇಯಾಕ್ ಭಾಷೆಯ ಕೊನೆ ಮಾತುಗಾರ ೨೦೦೮ರಲ್ಲಿ ನಿಧನ ಹೊಂದಿದನು. ಅಥಾಬಾಸ್ಕನ್ ಭಾಷೆಗಳು, ಟ್ಲಿಂಗಿಟ್ ಭಾಷೆ ಮತ್ತು ಎಯಕ್ ಭಾಷೆ ಈ ಭಾಷೆಯಲ್ಲಿ ಸೆರಿಕೊಂಡಿದೆ.